ಲಯನ್ ಜಿ. ನಾಗನೂರು `ಸಾಕ್ಷ್ಯ ಚಿತ್ರ’ ಇಂದು ಬಿಡುಗಡೆ

ಲಯನ್ ಜಿ. ನಾಗನೂರು `ಸಾಕ್ಷ್ಯ ಚಿತ್ರ' ಇಂದು ಬಿಡುಗಡೆ - Janathavaniಮನುಷ್ಯ ತನ್ನ ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ ಹೊರತು, ಹುಟ್ಟಿನಿಂದಲ್ಲ ಎಂಬ ಮಾತಿನಂತೆ   ದಿ. ಜಿ. ನಾಗನೂರ್‌ ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಮರ್ಥ ನಾಯಕರಾಗಿ, ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಂಡವರು.

ಸಂಸ್ಕಾರವಂತ  ಮುರಿಗೆಪ್ಪ ಮೇಷ್ಟ್ರು ಮತ್ತು ತಾಯಿ ಬಸಮ್ಮನವರ ಪುತ್ರರಾಗಿ ದಿನಾಂಕ 16-5-1945 ಜನಿಸಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ.

 ಮಹೇಂದ್ರ ಹೈಬ್ರಿಡ್ಜ್ ಸಂಸ್ಥೆಯ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು  ಲಯನ್ಸ್ ಕ್ಲಬ್‌  ಸದಸ್ಯರಾಗಿ ಸೇರ್ಪಡೆಯಾಗಿ, ಹಂತ ಹಂತವಾಗಿ ಎಲ್ಲಾ ಸ್ಥಾನಗಳನ್ನು ಪಡೆದು ಯಶಸ್ಸು ಕಂಡವರು.  

ಬದುಕಿನಲ್ಲಿ ಅನೇಕ ಏರುಪೇರು, ಕಷ್ಟ ನೋವುಗಳನ್ನು ಮತ್ತು ಕಠಿಣ ಪರಿಸ್ಥಿತಿಯನ್ನು ಧೈರ್ಯದಿಂದ ದಾಟಿ, ಕಾಯಕದಲ್ಲಿ ತೃಪ್ತಿ ಕಂಡಂತಹ ವ್ಯಕ್ತಿ.  1988-89ರಲ್ಲಿ ಲಯನ್ಸ್ ಡಿಸ್ಟ್ರಿಕ್ಸ್‌ನಲ್ಲಿ `ಬೆಸ್ಟ್ ಕ್ಲಬ್’ ಅವಾರ್ಡ್  ಪಡೆದರು. ನಂತರ  ಲಯನ್ಸ್ ಟ್ರಸ್ಟ್ ಚೇರ್ಮನ್ ಆಗಿ ಲಯನ್ಸ್ ಭವನ, ಲಯನ್ಸ್ ಶಾಲೆ ಕಟ್ಟಡ ನಿರ್ಮಾಣದಲ್ಲಿ  ಪ್ರಮುಖರಾಗಿ   ಅಭಿವೃದ್ಧಿ ಪಡಿಸಿದವರು.   1997-98 ರಲ್ಲಿ ಲಯನ್ಸ್  ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿ ಅನೇಕ ಸೇವಾ ಕಾರ್ಯಕ್ರಮಗಳೊಂದಿಗೆ 22 ಹೊಸ ಲಯನ್ಸ್ ಕ್ಲಬ್‌ಗಳು ಮತ್ತು 15 ಲಿಯೋ ಕ್ಲಬ್‌ಗಳನ್ನು ಪ್ರಾರಂಭಿಸಿ ಇತಿಹಾಸ ನಿರ್ಮಿಸಿದವರು.

ದಾವಣಗೆರೆ ಲಯನ್ಸ್ ಕ್ಲಬ್‌ನ ಭೀಷ್ಮ, ಆಧಾರ ಸ್ತಂಭ, ಲಯನ್ಸ್ ಹಿರಿಯ ನಾಯಕ  ಹೀಗೆ ಹಲವಾರು ಹೆಸರಿನಿಂದ ಕರೆಯುವ ಜಿ.ನಾಗನೂರ್ ಅವರು ಕೊರೊನಾ  ಸಂದರ್ಭದಲ್ಲಿ  ಬಾರದ ಲೋಕಕ್ಕೆ ತೆರಳಿದ್ದಾರೆ. 

ಜಿ. ನಾಗನೂರರ ಸಾರ್ಥಕ ಬದುಕಿನ ಸಾಕ್ಷ್ಯ ಚಿತ್ರವು ಹೆಚ್.ವಿ. ಮಂಜುನಾಥ ಸ್ವಾಮಿ ಅವರ ನಿರ್ದೇಶನದಲ್ಲಿ ಲಯನ್ಸ್ ಭವನದಲ್ಲಿ ಇಂದು ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ.  ಅಧ್ಯಕ್ಷತೆಯನ್ನು ಲಯನ್ಸ್‌ ಕ್ಲಬ್‌  ಅಧ್ಯಕ್ಷ  ಎನ್.ಆರ್.ನಾಗಭೂಷಣ್ ವಹಿಸುವರು.  ಡಾ. ಜಿ. ಶಿವಲಿಂಗಪ್ಪ ಉದ್ಘಾಟನೆ ಮಾಡಲಿದ್ದಾರೆ. ಡಾ. ಬಿ.ಎಸ್.ನಾಗಪ್ರಕಾಶ್, ಹೆಚ್.ಎನ್. ಶಿವಕುಮಾರ್, ಎ.ಆರ್. ಉಜ್ಜನಪ್ಪ, ಎ. ಎನ್. ಮದನ್ ಕುಮಾರ್, ಎಸ್.ಕೆ. ಶಿವಕುಮಾರ್, ಟಿ.ಎಂ. ಪಂಚಾಕ್ಷರಯ್ಯ, ಎಸ್.ಓಂಕಾರಪ್ಪ, ಶ್ರೀಮತಿ ಕಸ್ತೂರಿ ಜಿ. ನಾಗನೂರು ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

error: Content is protected !!