ನಗರಕ್ಕೆ ಐರಣಿ ಹೊಳೆಮಠದ ಶ್ರೀಗಳ ಆಗಮನ

ನಗರಕ್ಕೆ ಐರಣಿ ಹೊಳೆಮಠದ ಶ್ರೀಗಳ ಆಗಮನ - Janathavaniದಾವಣಗೆರೆ, ಮೇ 28- ರಾಣೇಬೆನ್ನೂರು ತಾಲ್ಲೂಕಿನ ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶೀಕೇಂದ್ರ ಸ್ವಾಮೀಜಿ ಇಂದು ಸಂಜೆ ನಗರಕ್ಕೆ ಆಗಮಿಸಿದ್ದಾರೆ.

ಐರಣಿ ಹೊಳೆಮಠದ ಹಿರಿಯ ಶ್ರೀಗಳಾದ ಶ್ರೀ ಮುಪ್ಪನಾರ್ಯ ಸ್ವಾಮೀಜಿಯವರ 39ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಬರುವ ಜೂನ್ 19 ರಿಂದ 21ರವರೆಗ ಮೂರು ದಿನಗಳ ಕಾಲ ಐರಣಿ ಹೊಳೆಮಠದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರೀ ಬಸವರಾಜ ದೇಶೀಕೇಂದ್ರ ಸ್ವಾಮೀಜಿ ನಗರಕ್ಕೆ ಆಗಮಿಸಿದ್ದಾರೆ.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ  ಐರಣಿ ಹೊಳೆಮಠದ ಶಾಖಾ ಮಠದಲ್ಲಿ ಶ್ರೀ ಬಸವರಾಜ ದೇಶೀಕೇಂದ್ರ ಸ್ವಾಮೀಜಿ 5 ದಿನಗಳ ಕಾಲ ವಾಸ್ತವ್ಯ ಮಾಡಲಿದ್ದು, ಸದ್ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳವರ ದರ್ಶನಾಶೀರ್ವಾದ ಪಡೆಯಯಬಹುದು. ಶ್ರೀ ಮುಪ್ಪಿನಾರ್ಯ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಸದ್ಭಕ್ತರು ತನು – ಮನ- ಧನ ಸಹಾಯ ಮಾಡುವಂತೆ ಮಠದ ಸದ್ಭಕ್ತರಾದ ಜೆ.ಕೆ. ಶಿವಾನಂದ್ ಕೋರಿದ್ದಾರೆ.

error: Content is protected !!