ದಾವಣಗೆರೆ, ಮೇ 28- ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿ ಯಲ್ ಎಜುಕೇಶನಲ್, ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಡಿದ್ದು ದಿನಾಂಕ 28 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ನಗರದ ರೋಟರಿ ಬಾಲಭವನದಲ್ಲಿ `ಬುದ್ಡ-ಬಸವ-ಅಂಬೇಡ್ಕರ್’ ಜಯಂತಿ ಹಾಗೂ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಜಿಲ್ಲಾಧ್ಯಕ್ಷ ಡಿ.ಎನ್.ಹಾಲೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬಂತೇಜಿ ಬಿಕ್ಕುಣಿ ಬುದ್ಧಮ್ಮ ವಹಿಸುವರು. ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
`ಪ್ರಸ್ತುತ ದಿನಮಾನಕ್ಕೆ ಬುದ್ಧನ ತತ್ವಗಳ ಅನಿವಾರ್ಯತೆ’ ವಿಷಯ ಕುರಿತು ಪ್ರೊ.ಎ.ಬಿ. ರಾಮಚಂದ್ರಪ್ಪ, `ನಮ್ಮ ಬದುಕಿನಲ್ಲಿ ಬಸವೇಶ್ವರರ ವಚನಗಳ ಪ್ರಾಮುಖ್ಯತೆ’ ಕುರಿತು ಧಾರವಾಡ ಜ್ಞಾನ ಬುದ್ದ ವಿಹಾರದ ಕಾರ್ಯದರ್ಶಿ ಎಫ್.ಹೆಚ್. ಜಕ್ಕಪ್ಪನವರ್ ಉಪನ್ಯಾಸ ನೀಡಲಿದ್ದಾರೆ.
`ಭಾರತೀಯ ಸಮುದಾಯಕ್ಕೆ ಅಂಬೇಡ್ಕರ್ ಕೊಡುಗೆ’ ಕುರಿತು ಡಿ.ಟಿ. ದೇವೇಂದ್ರನ್, `ಭಾರತೀಯ ಸಂವೀಧಾನ ರಚನೆಯಲ್ಲಿ ಬುದ್ಧ ತತ್ವಗಳ ಅಳವಡಿಕೆ’ ಕುರಿತು ಡಾ.ಜಿ.ಟಿ. ಗೋವಿಂದಪ್ಪ ಉಪನ್ಯಾಸ ನೀಡಲಿದ್ದಾರೆಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಎನ್. ರುದ್ರಮುನಿ, ಹೆಚ್.ಕೆ. ಬಸವರಾಜ್, ಎ.ಆರ್. ಮಹದೇ ವಪ್ಪ, ಆವರಗೆರೆ ರುದ್ರಮುನಿ ಆಗಮಿಸಲಿದ್ದಾರೆ. ಇದೇ ವೇಳೆ ಪ್ರೊ.ಎ.ಬಿ. ರಾಮಚಂದ್ರಪ್ಪ ಸಂಪಾದಿಸಿದ, ಮಾನವ ಬಂಧುತ್ವ ವೇದಿಕೆ ಪ್ರಕಾಶಿಸಿರುವ `ಮಹಾಬೆಳಕು’ ಪುಸ್ತಕ ಬಿಡು ಗಡೆ ಮಾಡಲಾಗುವುದು. ನಂತರ ದಾವಣಗೆರೆ ವಿಶ್ವವಿದ್ಯಾಲಯದಿಂದ ವಿಪಶ್ಯನ ಧ್ಯಾನ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಕೆ.ಕೊಟ್ರೇಶ್, ಎಂ.ಎಸ್. ಕೃಷ್ಣ, ಹನುಮಂತಯ್ಯ, ಆವರಗೆರೆ ರುದ್ರಮುನಿ, ಚಿದಾನಂದ ಮತ್ತಿತರರಿದ್ದರು.