2.07 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ

ದಾವಣಗೆರೆ, ಮೇ 26- ಮನೆಯಲ್ಲಿಯೇ ಕುಳಿತು ಹಣ ತೊಡಗಿಸಿ ಕಮಿಷನ್ ಪಡೆದು ಹೆಚ್ಚಿನ ಆದಾಯ ಗಳಿಸಿ ಎಂದು ಮೊಬೈಲ್‌ಗೆ ಬಂದ ಕರೆಗೆ ಸ್ಪಂದಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 2.07 ಲಕ್ಷ ರೂ.  ಕಳೆದುಕೊಂಡ ನಂತರ ತಾನು ಮೋಸ ಹೋಗಿರುವುದಾಗಿ ತಿಳಿದು ವಿದ್ಯಾನಗರದ ಸಿಇಎನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾನೆ. 

ನಗರದ ಪವನ್ ಎಂಬ ವಿದ್ಯಾರ್ಥಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಇಂಟರ್‌ ನ್ಯಾಷನಲ್ ಗ್ಲೋಬಲ್ ಕಂಪನಿಯವರು ಎಂದು ಪರಿಚ ಯಿಸಿಕೊಂಡು, ಮನೆಯಲ್ಲಿದ್ದುಕೊಂಡೇ ಹಣ ತೊಡಗಿಸಿ, ಕಮಿಷನ್‌ನಿಂದ ಹೆಚ್ಚು ಹಣ ಗಳಿಸಿ ಎಂದು ಹೇಳಿದ್ದನ್ನು ನಂಬಿ 9 ಬಾರಿ ಅವರ ಖಾತೆಗೆ ಹಣ ನೀಡಿದ್ದರು.

error: Content is protected !!