ವಾಲ್ಮೀಕಿ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ರಂಗಣ್ಣ ರಾಜೀನಾಮೆ

ಹೊನ್ನಾಳಿ, ಮೇ 25- ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅಧ್ಯಕ್ಷ ಕುಳಗಟ್ಟಿ ಕೆ.ಎಲ್.ರಂಗಣ್ಣ ಹೇಳಿದರು.

ತಮ್ಮ ಅವಧಿಯಲ್ಲಿ 1 ಕೋಟಿ ರೂ. ಸರ್ಕಾರದ ಅನುದಾನ ತಂದು ಸುಂಕದಕಟ್ಟೆ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದ ಅಭಿವೃದ್ಧಿ  ಕಾರ್ಯವನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.