ಜಿಲ್ಲೆಯ ರಾಜ್ಯ ಸ.ನೌಕರರ ಮಕ್ಕಳ ಪುರಸ್ಕಾರಕ್ಕೆ ಅರ್ಜಿ

ದಾವಣಗೆರೆ, ಮೇ 24- ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.  90 ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ 2023 ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಘದಿಂದ ನಿಗದಿಗೊಳಿಸಿರುವ ನಮೂನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ, ತಾಲ್ಲೂಕು, ಯೋಜನಾ ಶಾಖೆ, ಅಧ್ಯಕ್ಷರು ಗಳಿಂದ ಸೇವಾ ದೃಢೀಕರಣ ಪ್ರಮಾಣ ಪತ್ರವನ್ನು ದೃಢೀಕರಿಸಿ, ಆನ್‍ಲೈನ್ ಲಿಂಕ್‍ನೊಂದಿಗೆ 1.0 ಎಂ.ಬಿ ಮೀರದಂತೆ ಇದೇ ದಿನಾಂಕ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.

 ಹೆಚ್ಚಿನ ಮಾಹಿತಿಗಾಗಿ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ. ಗುರುಮೂರ್ತಿ  (98446 45183) ಅವರನ್ನು ಸಂಪರ್ಕಿಸಲು ಜಿಲ್ಲಾಧ್ಯಕ್ಷ ವೀರೇಶ ಎಸ್. ಒಡೇನಪುರ ತಿಳಿಸಿದ್ದಾರೆ.