ದಾವಣಗೆರೆ, ಮೇ 24- ನಗರದ ದೇವರಾಜ ಅರಸು ಬಡಾವಣೆ ಬ್ಲಾಕ್ನಲ್ಲಿರುವ ಈಜುಕೊಳದಲ್ಲಿ ತಾಜುದ್ದೀನ್ ಬಿನ್ ನಿಸಾರ್ ಅಹಮದ್ ಮತ್ತು ಮುಬಾರಕ್ ಬಿನ್ ಎಸ್.ಆರ್.ಮುಕ್ತಿಯಾರ್ ಇಬ್ಬರು ಬಾಲಕರು ಮೃತರಾಗಿದ್ದು, ಸಂತ್ರಸ್ಥರ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಬುಧವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಈಗಾಗಲೇ ಘಟನೆ ಸಂಭವಿಸಲು ನಿರ್ಲಕ್ಷ್ಯತೆಯ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದ್ದು, ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಹಣದಿಂದ ಪರಿಹಾರದ ಹಣ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ವೇಳೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಹಿಟ್ನಾಳ್ ಉಪಸ್ಥಿತರಿದ್ದರು.