ಚಿತ್ರದುರ್ಗ, ಮೇ 22- ಮುರುಘಾ ಮಠಕ್ಕೆ ಆಡಳಿತಾಧಿ ಕಾರಿ ಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿರುವುದು ಸ್ವಾಗತಾರ್ಹ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ. ನ್ಯಾಯಾಲಯದ ತೀರ್ಪನ್ನು ಶ್ರೀಮಠದ ಎಲ್ಲಾ ಭಕ್ತರು, ನೌಕರರ ಪರವಾಗಿ ಸ್ವಾಗತಿಸುತ್ತೇವೆ. ಗೆಲುವು ಸಿಗುತ್ತದೆಂಬ ವಿಶ್ವಾಸ ನಮಗೆ ಇತ್ತು. ಅಂತೆಯೇ ಇಂದು ನ್ಯಾಯಾಲಯ ನಿರ್ಣಯ ನೀಡಿದೆ ಎಂದು ಬಸವ ಪ್ರಭು ಸ್ವಾಮೀಜಿ ಹೇಳಿದ್ದಾರೆ.
February 2, 2025