ಸಿದ್ದರಾಮಯ್ಯ ಅವರನ್ನು ಟೀಕಿಸಿದ ಶಿಕ್ಷಕ ಅಮಾನತ್ತು

ಹೊಸದುರ್ಗ, ಮೇ 21- ಫೇಸ್‌ಬುಕ್‌ ಖಾತೆಯಲ್ಲಿ ಸರ್ಕಾರವನ್ನು ಟೀಕಿಸುವ ಬರಹ  ಪೋಸ್ಟ್‌ ಮಾಡಿದ ಆರೋ ಪದ ಮೇಲೆ  ಶಿಕ್ಷಕರೊಬ್ಬರನ್ನು ಅಮಾನತ್ತು ಮಾಡಲಾಗಿದೆ. ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ಅಮಾನತ್ತು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಾಂತಮೂರ್ತಿ ಅವರು, ‘ಎಸ್.ಎಂ. ಕೃಷ್ಣ ಅವಧಿಯಲ್ಲಿ  3,590 ಕೋಟಿ, ಧರ್ಮಸಿಂಗ್  15,635 ಕೋಟಿ, ಎಚ್.ಡಿ. ಕುಮಾರಸ್ವಾಮಿ  3,545 ಕೋಟಿ, ಬಿ.ಎಸ್‌. ಯಡಿಯೂರಪ್ಪ  25,653 ಕೋಟಿ, ಸದಾನಂದಗೌಡ  9,464 ಕೋಟಿ, ಜಗದೀಶ ಶೆಟ್ಟರ್   13,464 ಕೋಟಿ, ಸಿದ್ದರಾಮಯ್ಯ   2,42,000 ಕೋಟಿ ಸಾಲ ಮಾಡಿದರು.

ಎಸ್.ಎಂ. ಕೃಷ್ಣ ಅವಧಿಯಿಂದ ಶೆಟ್ಟರ್‌ವರೆಗೆ ಮಾಡಿದ ಒಟ್ಟು ಸಾಲ   71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ‌ಸಾಲ  2,42,000 ಕೋಟಿ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು  ಎಂದು ಬರಹದಲ್ಲಿ ಟೀಕಿಸಿದ್ದರು. ಈ ಮಾಹಿತಿಯನ್ನು ವಾಟ್ಸ್‌ಆಪ್ ಗ್ರೂಪ್‌ಗಳಿಗೂ ಶೇರ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತ್ತು ಮಾಡಿದ್ದಾರೆ.

error: Content is protected !!