ರಾಣೇಬೆನ್ನೂರು ಮೇ 20- ಇಲ್ಲಿನ ಹಲಗೇರಿ ರಸ್ತೆಯಲ್ಲಿರುವ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯಕ್ಕೆ ನ್ಯಾಕ್ನಿಂದ 2.71 ಸಿಜಿಪಿಎ ದೊಂದಿಗೆ ಬಿ+ ಮಾನ್ಯತೆ ನೀಡಿದೆ.
ಕಳೆದ ವಾರ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ತಂಡ ಕಾಲೇಜಿನ ಎಲ್ಲಾ ಸೌಲಭ್ಯಗಳೊಂದಿಗೆ ದಾಖಲಾತಿ ಪರಿಶೀಲಿಸಿ ಈ ಗ್ರೇಡ್ ನೀಡಿದ್ದು, ಇದಕ್ಕೆ ಸಂಸ್ಥೆಯ ಕಾರ್ಯದರ್ಶಿ ಡಾ ಆರ್. ಎಂ. ಕುಬೇರಪ್ಪ, ಅಧ್ಯಕ್ಷ ರುದ್ರಪ್ಪ ಲಮಾಣಿ, ಪ್ರಾಚಾರ್ಯ ಡಾ. ಸುರೇಶ್ ಬಣಕಾರ್ ಹರ್ಷ ವ್ಯಕ್ತಪಡಿಸಿದ್ದಾರೆ.