ತರಳಬಾಳು ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ದಾವಣಗೆರೆ, ಮೇ 21 – ನಗರದ ತರಳಬಾಳು ಶಾಲೆ (ರಾಜ್ಯ ಮತ್ತು ಸಿಬಿಎಸ್‌ಇ) ಯಲ್ಲಿ  2 ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿ ಗಳಿಗೆ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಹೊಸದುರ್ಗದ ಪ್ರಾಚಾರ್ಯ ಬಸವರಾಜ್ ಸಿರಿಗೆರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತರಳಬಾಳು ಶಾಲೆ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಎಂ.ಬಿ. ರಾಜಪ್ಪ, ಆರ್‌.ವಿ.ಮಠದ್ ಉಪಸ್ಥಿತರಿದ್ದರು.

21 ದಿನಗಳ ಕಾಲ ನಡೆಸಲಾಗಿದ್ದ ಶಿಬಿರದಲ್ಲಿ ಕ್ರಿಯಾ ಯೋಜನೆ, ಸೃಜನಶೀಲ ಚಟುವಟಿಕೆಗಳ ತುಣುಕು ಗಳನ್ನು ಸಿನಿಮಾ ದೃಶ್ಯ ಮಾಧ್ಯಮದಲ್ಲಿ ತೋರಿಸಿಕೊಟ್ಟರು.

ಮಕ್ಕಳು ಬೇಸಿಗೆ ಶಿಬಿರದಲ್ಲಿ ಕಲಿತಂತಹ ಕೌಶಲ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅದರಲ್ಲಿ ಮಣ್ಣಿನ ಮಡಕೆಗಳು, ಬಣ್ಣ ಬಣ್ಣದ ಆಟಿಕೆಗಳು, ಮಕ್ಕಳು ಡ್ರಾಯಿಂಗ್ ಮಾಡಿದ ಪುಟಗಳು ಪೋಷಕರನ್ನು ಆಕರ್ಷಿಸಲ್ಪಟ್ಟಿತ್ತು.

ತರಳಬಾಳು ಸೆಂಟ್ರಲ್ ಸ್ಕೂಲ್ ಅಜ್ಜಿಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಎನ್‌ಇಪಿ ಶಿಕ್ಷಣವನ್ನು ಬೇಸಿಗೆ ಶಿಬಿರದೊಂದಿಗೆ ಸಹ ಪಠ್ಯೇತರವಾಗಿ ಸೇರಿಸಿ ನಡೆಸಿದ ಚಟುವಟಿಕೆಗಳ ಬಗ್ಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿದಿನ ಸಂಜೆ 7 ರಿಂದ 7.30 ರವರೆಗೆ ರಸಪ್ರಶ್ನೆ ಕಾರ್ಯಕ್ರಮದ ಪ್ರಶ್ನಾವಳಿಗಳನ್ನು ಪ್ರತಿ ಮಗುವಿಗೆ ತಲುಪಿಸಲಾಯಿತು. ಅವರು ಕೊಟ್ಟ ಉತ್ತರಗಳನ್ನು ಗಣಕ ಯಂತ್ರದಲ್ಲಿ ಕ್ರೋಢೀಕರಿಸಿ ಮೊದಲ ದಿನದ ಶಾಲಾ ಪ್ರಾರಂಭದಲ್ಲಿ ಮಕ್ಕಳ ಬಹುಮಾನ ವಿತರಿಸಲಾಗುತ್ತದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್. ಕಿರಣ್‌ಕುಮಾರ್ ತಿಳಿಸಿದರು. 

error: Content is protected !!