ದಾವಣಗೆರೆ, ಮೇ 21- ನಗರದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜ್ನಲ್ಲಿ ಬಿಸಿಎ ಮತ್ತು ಬಿಕಾಂ ಪದವಿ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯಬಹುದು. ದಾವಿವಿ ಸಂಯೋಜನೆಗೆ ಒಳಗಾಗಿರುವ ಕಾಲೇಜ್, ಪಾರ್ಟ್ಟೈಮ್ ಅಥವಾ ಜಾಬ್ ಮಾಡುವವರ ಕಲಿಕೆಯ ಆಸಕ್ತಿಗೆ ಪೂರಕವಾಗಿದ್ದು, ದ್ವಿತೀಯ ಪಿಯುಸಿ, ಡಿಪ್ಲೋಮಾ ಮತ್ತು ಐಟಿಐ ಪಾಸಾದ ಆಸಕ್ತ ವಿದ್ಯಾರ್ಥಿಗಳು ಈ ಸಂಜೆ ಕಾಲೇಜಿಗೆ ಸೇರಬಹುದು ಎಂದು ಪ್ರಾಂಶುಪಾಲರಾದ ಡಾ. ಸಿ.ಕೆ.ಕೊಟ್ಟಪ್ಪ ತಿಳಿಸಿದ್ದಾರೆ.
January 10, 2025