ದಾವಣಗೆರೆ, ಮೇ 21- ಗಡಿನಾಡಿನಲ್ಲಿ ಯಕ್ಷಗಾನ, ಗಮಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಚೇತನ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಅವರಿಗೆ `ರಂಗ ಚಿನ್ನಾರಿ’ರಾಜ್ಯ ಪ್ರಶಸ್ತಿ ನೀಡಲಾಗಿದೆ. ಕೇರಳದ ಕಾಸರಗೋಡಿನ `ರಂಗ ಚಿನ್ನಾರಿ’ ಸಾಂಸ್ಕೃ ತಿಕ ಸಂಸ್ಥೆಯ ಈ ಪ್ರಶಸ್ತಿಯನ್ನು ಎಡೆನೀರು ಮಠದ ಸಭಾಂಗಣದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿನ್ನೆ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
January 10, 2025