ಹೊನ್ನಾಳಿ ತಾ.ನ ಸುಂಕದಕಟ್ಟೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ತರಗತಿ ಪ್ರಾರಂಭ

ಹೊನ್ನಾಳಿ, ಮೇ 21- ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎರಡು ಕೋರ್ಸ್‍ಗಳು ಲಭ್ಯ ಇವೆ. ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್‍ಗೆ 60+3. ಸೀಟ್‍ಗಳು ಮತ್ತು ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ ಕೋರ್ಸ್‍ಗೆ 60+3 ಸೀಟ್‍ಗಳು ಲಭ್ಯ ಇವೆ ಎಂದು ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನಿಷ್ಟ ಶೇ.35ರಷ್ಟು ಅಂಕಗಳನ್ನು ಪಡೆದಿರಬೇಕು. ಪಿಯುಸಿ ಪಾಸ್ ಇಲ್ಲವೇ ಫೇಲ್ ಆದ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರು.  ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವೇತನ ಲಭಿಸಲಿದೆ ಎಂದರು.

ಸರ್ಕಾರಿ ಪಾಲಿಟೆಕ್ನಿಕ್ಕ್ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ ಬಿ. ಶಾಂತ ಕುಮಾರ್‍ನಾಯ್ಕ್  (9482204905), ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ ವಿಭಾಗಾಧಿಕಾರಿ ಆಟೋಮೊಬೈಲ್ ವಿಭಾಗ (9880719412),  ಟಿ.ಎಲ್.ಮಹಾಲಿಂಗಪ್ಪ ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ ವಿಭಾಗಾಧಿಕಾರಿ (9986072697) ಅವರುಗಳನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಟಾಕಪ್ಪ ಚವ್ಹಾಣ, ಟಿ.ಎಲ್.ಮಹಾಲಿಂಗಪ್ಪ, ಪ್ರಕಾಶ್‍ಕುಂಬಾರ್, ಸತೀಶ್‍ಕುಮಾರ ಆರ್.ಅರಳಿಕಟ್ಟೆ, ಹೆಚ್.ದೊಡ್ಡಸ್ವಾಮಿ, ಸಿ.ರವಿಕುಮಾರ, ಹೆಚ್.ವಿ. ಚೇತನ್ ಅತಿಥಿ ಉಪನ್ಯಾಸಕರು ಇದ್ದರು.

error: Content is protected !!