ದಾವಣಗೆರೆ, ಮೇ 19 – ನಗರದ ದವನ್ ಕಾಲೇಜಿನ ವಿದ್ಯಾರ್ಥಿ ಎಂ. ಆರ್. ಲಿಖಿತ್ ದ್ವಿತಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 588 ಅಂಕಗೊಂದಿಗೆ ಶೇ. 98 ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸ್ಥಳೀಯ ಶ್ರೀಮತಿ ಸುಧಾ ಮತ್ತು ರಮೇಶ್ ದಂಪತಿ ಪುತ್ರ ಲಿಖಿತ್, ಮರು ಮೌಲ್ಯಮಾಪನದಲ್ಲಿ ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಎರಡೂ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಲಿಖಿತ್ ಅವರನ್ನು ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾತಿ ಬಸವರಾಜ್, ನಿರ್ದೇಶಕ ಹರ್ಷರಾಜ್ ಎ ಗುಜ್ಜಾರ್, ಪ್ರಾಚಾರ್ಯರಾದ ಹೆಚ್.ಸಿ. ಅಶ್ವಿನಿ ಅಭಿನಂದಿಸಿದ್ದಾರೆ.