ಎಸ್ಸೆಸ್‌ಗೆ ಸಿಎಂ, ಎಂ.ಬಿ. ಪಾಟೀಲ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ವೀರಶೈವ ಮಹಾಸಭಾ ಆಗ್ರಹ

ದಾವಣಗೆರೆ, ಮೇ 15- ಹಿರಿಯ ರಾಜಕೀಯ ಮುತ್ಸದ್ಧಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯ ಮಂತ್ರಿ ಅಥವಾ ಎಂ.ಬಿ. ಪಾಟೀಲ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 39 ಮಂದಿ ಶಾಸಕರು ವೀರಶೈವ ಲಿಂಗಾಯತ ಸಮಾಜದಿದಂದ  ಚುನಾಯಿತರಾಗಿದ್ದಾರೆ. ಭಾರತದಲ್ಲಿ  ನಾಲ್ಕು ಕೋಟಿ, ರಾಜ್ಯದಲ್ಲಿ ಎರಡು ಕೋಟಿ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ  ಸಮಾಜದ ಹಿರಿಯ ಮುಖಂಡರಾದ ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್. ಎಸ್. ಮಲ್ಲಿಕಾರ್ಜುನ್ ಈ ಮೂವರಲ್ಲಿ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಒತ್ತಾಯಿಸಿದರು.

ಸಂಪುಟದಲ್ಲಿ 8 ರಿಂದ 9 ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆಂಬ ವಿಶ್ವಾಸ ಕೂಡ ತಮ್ಮದಾಗಿದ್ದು, ಹೆಚ್ಚಿನ ಆದ್ಯತೆ ನೀಡುವಂತೆ  ಪಕ್ಷಾತೀತವಾಗಿ ವೀರಶೈವ ಸಮುದಾಯದಿಂದ ಮನವಿ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಮುಖಂಡರಾದ ಬಿ.ಜೆ. ರಮೇಶ್, ಕರೇಶಿವಪ್ಳ ಸಿದ್ದೇಶ್, ಐಗೂರು ಚಂದ್ರಶೇಖರ್, ಬುಳ್ಳಾ ಪುರದ ವಿಶ್ವನಾಥ್, ಕೊರಟಿಕೆರೆ ಶಿವಕುಮಾರ್, ನಿರ್ಮಲ ಸುಭಾಷ್ ಉಪಸ್ಥಿತರಿದ್ದರು.

error: Content is protected !!