ದಾವಣಗೆರೆ, ಮೇ 14- ರಾಷ್ಟ್ರಮಟ್ಟದ ಹತ್ತನೇ ತರಗತಿಯ ಐಸಿಎಸ್ಇ ಪರೀಕ್ಷೆಯಲ್ಲಿ ನಗರದ ಶ್ರೀ ತರಳಬಾಳು ಸ್ಕೂಲ್ಗೆ ಶೇ. 100 ರಷ್ಟು ಫಲಿತಾಂಶ ಲಭಿಸಿರುತ್ತದೆ.
ಅಧಿತಿ ವೀರೇಶ್ ಅಂಗಡಿ ಶೇ. 98.83 ರಷ್ಟು ಅಂಕಗಳನ್ನು ಪಡೆದು ಜಿಲ್ಲೆ ಹಾಗೂ ಶಾಲೆಗೆ ಮೊದಲಿಗರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶಾಲೆಗೆ ಉತ್ತಮ ಫಲಿತಾಂಶವನ್ನು ದೊರೆಕಿಸಿಕೊಟ್ಟ ವಿದ್ಯಾರ್ಥಿಗಳನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪ್ರಾಂಶುಪಾಲರಾದ ಕೆ.ಬಿ. ಮಂಜುಳಾ ಅಭಿನಂದಿಸಿದ್ದಾರೆ.