ದಾವಣಗೆರೆ, ಮೇ 12- ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವವು ಅಮೂಲ್ಯವಾದುದು. ಮನುಷ್ಯತ್ವದ ನೆಲೆಯಲ್ಲಿ ಸಕಲ ಜೀವಿಗಳನ್ನು ಕಾಣಬೇಕು. ಮಾನವೀಯತೆಯ ಗುಣಗಳನ್ನು ಮೈಗೂಡಿಸಿಕೊಂಡು ಅಪಘಾತ ಸಂದರ್ಭದಲ್ಲಿ ಜೀವ ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಸಾಮಾಜಿಕ ಸೇವಾ ಕಾರ್ಯಕರ್ತ ಹೆಲ್ಪ್‌ಲೈನ್ ಸುಭಾನ್ ಹೇಳಿದರು.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ಯುವ ರೆಡ್‌ಕ್ರಾಸ್ ಘಟಕ ಹಮ್ಮಿಕೊಂಡಿದ್ದ ಜೀವ ರಕ್ಷಣೆ ಕುರಿತ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಡಾ.ಜಿ.ಬಿ. ಬೋರಯ್ಯ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಅನಿತಕುಮಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಿ.ಕೆ. ಮಲ್ಲಿಕಾರ್ಜುನಪ್ಪ, ಎನ್‌ಸಿಸಿ ಕಮಾಂಡರ್ ಪ್ರೊ. ರಶ್ಮಿ, ರಮೇಶ್ ಪೂಜಾರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಹೆಚ್.ಆರ್. ತಿಪ್ಪೇಸ್ವಾಮಿ, ಡಾ. ಚಮನ್‌ಸಾಬ್ ಮೊದಲಾದವರಿದ್ದರು.