ದಾವಣಗೆರೆ, ಮೇ 11- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಸತತ 10ನೇ ವರ್ಷ ಶೇ. 100 ರಷ್ಟು ಫಲಿತಾಂಶ ಪಡೆದಿದ್ದು, ಈ ಬಾರಿ ಕು. ಕ್ರೀನಾ ಕೆ.ಎಸ್. 625 ಕ್ಕೆ 617 ಅಂಕ ಪಡೆದಿದ್ದು ಶೇ. 98.72 ಪಡೆದು ಶಾಲೆಗೆ ಪ್ರಥಮ ಸ್ಥಾನ, ಕು. ಸುಹಾನ ಡಿ. ಮತ್ತು ಕು. ಕೃತಿಕಾ ಕೆ.ಎಂ. 625 ಕ್ಕೆ 614 ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಶಾಲೆಗೂ ಮತ್ತು ಪೋಷಕರಿಗೂ ಗೌರವ ತಂದಿರುವ ಉತ್ತಮ ಫಲಿತಾಂಶ ಕ್ಕೆ ಸಹಕರಿಸಿದ ವಿದ್ಯಾರ್ಥಿಗಳಿಗೂ ಮತ್ತು ಪೋಷಕರುಗಳಿಗೂ ಶಾಲೆಯ ಆಡಳಿತ ಮಂಡಳಿಯು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
January 10, 2025