ಗೊಲ್ಲರಹಳ್ಳಿ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಶೇ. 97 ಫಲಿತಾಂಶ

ಗೊಲ್ಲರಹಳ್ಳಿ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಶೇ. 97 ಫಲಿತಾಂಶ - Janathavaniಹೊನ್ನಾಳಿ, ಮೇ 11-  ತಾಲೂಕಿನ ಗೊಲ್ಲರಹಳ್ಳಿ ಗ್ರಾಮೀಣ ವಿದ್ಯಾಸಂಸ್ಥೆಯ  ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  ಶೇ.97 ಫಲಿತಾಂಶ ಬಂದಿದೆ ಎಂದು ಎಂದು ಸಂಸ್ಥೆ ಕಾರ್ಯದರ್ಶಿ ಜಿ.ಪಿ.ಹರೀಶ್ ತಿಳಿಸಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 29 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 5 ಡಿಸ್ಟಿಂಕ್ಷನ್, 18 ಪ್ರಥಮ, 5 ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿನಿಯರಾದ ಎ.ಜಿ.ದಿವ್ಯ, ಬೆನಕನಕಹಳ್ಳಿ ಗ್ರಾಮ (593) ಶೇ.94.88, ಎಚ್.ಬಿ.ಯಶಸ್ವಿನಿ, ಬೆನಕನಹಳ್ಳಿ ಗ್ರಾಮ (582) ಶೇ.93.12, ಪಲ್ಲವಿ ಕೆ.ಆಚಾರ್, ಕಮ್ಮಾರಗಟ್ಟೆ ಗ್ರಾಮ (578) ಶೇ.92.48,  ಅಮೂಲ್ಯ ಎಂ.ಉಪ್ಪಾರ್, ಕುಂದೂರು ಗ್ರಾಮ (546) ಶೇ.87.36, ಜಿ.ಎನ್.ನವ್ಯ, ಹೊಸದೇವರ ಹೊನ್ನಾಳಿ ಗ್ರಾಮ (541) ಶೇ.86.56 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

error: Content is protected !!