ಎಸ್ಸೆಸ್ಸೆಲ್ಸಿಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಶೇ. 97.92 ಫಲಿತಾಂಶ

ಎಸ್ಸೆಸ್ಸೆಲ್ಸಿಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಶೇ. 97.92 ಫಲಿತಾಂಶ - Janathavaniಹರಪನಹಳ್ಳಿ, ಮೇ 11- ಆನಂತನಹಳ್ಳಿಯ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‍ಎಂಎಸ್‍ಎ) ಕ್ಕೆ  ಎಸ್ಸೆಸ್ಸೆಲ್ಸಿಯಲ್ಲಿ ಶೇ. 97.92 ಫಲಿ ತಾಂಶ ಬಂದಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಹೆಚ್.ಕೆ. ಚಂದ್ರಪ್ಪ ತಿಳಿಸಿದ್ದಾರೆ. 

ಪರೀಕ್ಷೆ ಕುಳಿತವರು – 72, ಉತ್ತೀರ್ಣರಾದವರು – 70, ಪರೀಕ್ಷೆಗೆ ಗೈರು ಹಾಜರಿ ಆದವರು – 1, ಪರೀಕ್ಷೆಯಲ್ಲಿ ಅನುತ್ತೀರ್ಣರಾ ದವರು – 1, ಶಾಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಕು. ರಶ್ಮಿತಾ ಎಸ್.ಎಂ., ಪಡೆದ ಅಂಕಗಳು 612. ಶಾಲೆಗೆ ಎರಡನೇ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಕು. ದಿವ್ಯಾ ಕೆ.ಸಿ., ಪಡೆದ ಅಂಕಗಳು 605.

ಶಾಲೆಗೆ ಮೂರನೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕು. ಯು.ಎಂ.ಚೈತ್ರ, ಪಡೆದ ಅಂಕ 596. ಅತಿ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಶಾಲೆಯ ಪರವಾಗಿ, ಮುಖ್ಯೋಪಾಧ್ಯಾಯರ ಪರವಾಗಿ, ಸರ್ವ ಶಿಕ್ಷಕರ ಪರವಾಗಿ, ಎಸ್‌ಡಿಎಮ್‌ಸಿ ಅವರ ಪರವಾಗಿ, ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ.

error: Content is protected !!