ಎಲೆಬೇತೂರಿನ ಶ್ರೀ ತರಳಬಾಳು ಪ್ರೌಢಶಾಲೆಗೆ ಶೇ. 100 ಫಲಿತಾಂಶ

ಎಲೆಬೇತೂರಿನ ಶ್ರೀ ತರಳಬಾಳು ಪ್ರೌಢಶಾಲೆಗೆ ಶೇ. 100 ಫಲಿತಾಂಶ - Janathavaniದಾವಣಗೆರೆ, ಮೇ 11 – ಎಲೆಬೇತೂರಿನ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 2022-23ನೇ ಸಾಲಿನಲ್ಲಿ ಶೇ. 100 ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. 

ಶೈಕ್ಷಣಿಕ ವರ್ಷದಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 5 ವಿದ್ಯಾರ್ಥಿಗಳು ಉನ್ನತ ದರ್ಜೆ ಮತ್ತು 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾವ್ಯ ವಿ.ಎಸ್. (588), ಲೋಹಿತ್‌ ರಾಜ್ ಆರ್. (570), ಸುನಂದ ಬಿ.ಜಿ. (552), ಲತಿಕಾ ಬಿ.ಜಿ. (532) ಮತ್ತು ಸಂಜನಾ ಆರ್. (532)  ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

error: Content is protected !!