ಎಲೆಬೇತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಗೆ ಶೇ. 96.22 ಫಲಿತಾಂಶ

ದಾವಣಗೆರೆ, ಮೇ 9 – ಎಲೆಬೇತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ 2022-23ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶೇ. 96.22ರಷ್ಟು ಫಲಿತಾಂಶ ಪಡೆದಿದೆ. ಶೈಕ್ಷಣಿಕ ವರ್ಷದಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉನ್ನತ ಶ್ರೇಣಿ-02, ಪ್ರಥಮ ಶ್ರೇಣಿ-26, ದ್ವಿತೀಯ ಶ್ರೇಣಿ-16 ಹಾಗೂ ತೃತೀಯ ಶ್ರೇಣಿ-07, ಒಟ್ಟು 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಂಗೀತ ಡಿ. (533), ಸುಮ.ಜೆ. (532) ಮತ್ತು ವೀರೇಶ್ ಆರ್. (526) ಇವರುಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

error: Content is protected !!