ದಾವಣಗೆರೆ, ಮೇ 6- ರಾಜ್ಯ ವಿಧಾನ ಸಭೆ ಚುನಾವಣೆಯು ಇದೇ ದಿನಾಂಕ 10 ರಂದು ನಡೆಯಲಿದ್ದು, ಜಿಲ್ಲೆಯ 7 ಕ್ಷೇತ್ರ ಗಳಿಗೆ ಇದೇ ದಿನಾಂಕ 9 ರಂದು ಮಸ್ಟರಿಂಗ್ ಮತ್ತು ಇದೇ ದಿನಾಂಕ 10 ರಂದು ನಡೆಯುವ ಡಿಮಸ್ಟರಿಂಗ್ ಕೇಂದ್ರ ಗಳನ್ನು ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಗಳೂರು-ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ- ಸೇಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ- ಡಿ.ಆರ್.ಆರ್.ವಿದ್ಯಾಸಂಸ್ಥೆ, ಪಿ.ಬಿ.ರಸ್ತೆ, ದಾವಣಗೆರೆ ದಕ್ಷಿಣ- ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಪಿ.ಜೆ.ಬಡಾವಣೆ, ಹೈಸ್ಕೂಲ್ ಮೈದಾನ, ಮಾಯಕೊಂಡ- ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ದಾವಣಗೆರೆ. ಚನ್ನಗಿರಿ- ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹೊನ್ನಾಳಿ ಕ್ಷೇತ್ರದ ಮಸ್ಟರಿಂಗ್, ಡಿಮಸ್ಟರಿಂಗ್ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ, ಹೊನ್ನಾಳಿ ಇಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.