ಕರುಣಾ ಜೀವ ಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ `ಬುದ್ಧನ ಅಷ್ಟಾಂಗ ಮಾರ್ಗಗಳು’ ವಿಷಯ ಕುರಿತು ಚಿಂತನೆ, ಸಂವಾದವು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ನಡೆಯಲಿದೆ. ಬೆಳಿಗ್ಗೆ 6 ರಿಂದ 7 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿವನಕೆರೆ ಬಸವಲಿಂಗಪ್ಪ ಚಿಂತನೆ ನಡೆಸುವರು. ಸಂವಾದದಲ್ಲಿ ಗುರುಮೂರ್ತಿ, ಎಂ. ಗಂಗಾಧರಪ್ಪ, ಪ್ರೊ. ಎಂ. ಬಸವರಾಜ್, ಡಾ. ನಾಗರಾಜ್ ಆಚಾರ್, ಕೆ.ಆರ್. ಸಿದ್ದಪ್ಪ, ಮಹಾಂತೇಶ್ ಅಗಡಿ, ಲಾಯರ್ ಸಿದ್ದಯ್ಯ, ಮಲ್ಲಾಬಾದಿ ಬಸವರಾಜ್ ಭಾಗವಹಿಸುವರು.
January 12, 2025