ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಾಳೆ ಶಿವಾನುಭವ ಗೋಷ್ಠಿ

ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಾಳೆ ಶಿವಾನುಭವ ಗೋಷ್ಠಿ - Janathavaniದಾವಣಗೆರೆ, ಏ. 3- ನಗರ ಸಮೀಪದ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ 266ನೇ ಬುದ್ಧ ಪೌರ್ಣಿಮೆ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 5ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯಜ್ಜನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಯೋಗಿ ಸ್ವಾಮಿ ಉಪಸ್ಥಿತರಿರುವರು.

ಅಂದಿನ ಪ್ರಸಾದ ಸೇವೆಯನ್ನು ಬೆಂಗಳೂರಿನ ಲಿ. ಶ್ರೀ ಟಿ.ಕೆ. ವೀರಣ್ಣ ಇವರ ಸ್ಮರಣಾರ್ಥ ಶ್ರೀಮತಿ ಉಮಾ ಮತ್ತು ಕುಟುಂಬದವರು ಹಾಗೂ ದಾವಣಗೆರೆಯ ಡಾ. ಟಿ.ಜಿ. ನಿರಂಜನ್ ಹಾಗೂ ಕುಟುಂಬ ದವರು, ವೈಶ್ಯ ಸೇವಾಭೂಷಣ ಪಾಲ ರಾಜಗುಪ್ತರವರು ಲಿಂ. ಶ್ರೀಮತಿ ಪಿ.ಆರ್. ಶಾರದ ಮತ್ತು ಸಹೋದರರು ಮತ್ತು ಮಕ್ಕಳು, ಮೊಮ್ಮಕ್ಕಳು ಹಾಗೂ ಸಿ.ಜಿ. ಯಲ್ಲಪ್ಪ ಮತ್ತು ಮಕ್ಕಳು ವಹಿಸಿಕೊಳ್ಳಲಿದ್ದಾರೆ.

error: Content is protected !!