ಪಿಯುಸಿ : ಎ.ವಿ.ಕೆ. ಕಾಲೇಜಿಗೆ ಉತ್ತಮ ಫಲಿತಾಂಶ

ಪಿಯುಸಿ : ಎ.ವಿ.ಕೆ. ಕಾಲೇಜಿಗೆ ಉತ್ತಮ ಫಲಿತಾಂಶ - Janathavaniದಾವಣಗೆರೆ, ಮೇ 3- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ ಎನ್. ವಿರಾಜ (ಶೇ. 96.16), ವಿ. ಕಾವ್ಯ (ಶೇ. 94.33), ಇ.ಎಲ್. ತನುಶ್ರೀ (ಶೇ. 93.83), ಕಲಾ ವಿಭಾಗದಲ್ಲಿ ಶಮ್ಯ ಜೆ. ಬೆಣ್ಣೆಹಳ್ಳಿ (ಶೇ. 94.33), ವಿ. ಅಮೃತ,  ಟಿ. ಸೋನಾ (ಶೇ. 94) ಹಾಗೂ ವಿಜ್ಞಾನ ವಿಭಾಗದಲ್ಲಿ ಸಂಜನಾ ಎನ್. ಜೋಗಿ (ಶೇ. 93), ಎ. ಶ್ರದ್ಧಾ (ಶೇ. 91.33) ಶೇಕಡಾವಾರು ಅಂಕ ಗಳಿಸಿದ್ದಾರೆ.

25 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 111 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ  ಪ್ರಾಚಾರ್ಯ ರವಿ ಬಣಕಾರ್ ತಿಳಿಸಿದ್ದಾರೆ.

error: Content is protected !!