ಹಾಲಕೆರೆ ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ವತಿಯಿಂದ ಇಂದು ಸಂಜೆ 6.30 ಕ್ಕೆ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ 257 ನೇ ಶಿವಾನುಭವ ಸಂಪದ, ಮಹಿಳಾ ದಿನಾಚರಣೆ ಹಾಗೂ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ. ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ಗ್ರಂಥಾಲಯ ಅಧಿಕಾರಿ ನಾಗರತ್ನ ಹೊಸಮನಿ ನರೇಂದ್ರ ಪ್ರಕಾಶ್ ಉಪನ್ಯಾಸ ನೀಡಲಿದ್ದಾರೆ. ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಅವರನ್ನು ಸನ್ಮಾನಿಸಲಾಗುವುದು. ಅನ್ನದಾನೀಶ್ವರ ಮಠದ ಅಕ್ಕನ ಬಳಗದ ಅಧ್ಯಕ್ಷರಾದ ಶ್ರೀಮತಿ ಮಂಗಳ ವೀರಪ್ಪ ಭಾವಿ ಅಧ್ಯಕ್ಷತೆ ವಹಿಸಲಿದ್ದಾರೆ.
January 22, 2025