ದಾವಣಗೆರೆ, ಏ. 27- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ `ಮತದಾನ ಜಾಗೃತಿ ಕವಿಗೋಷ್ಠಿ’ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಇದೇ ದಿನಾಂಕ 30 ರ ಭಾನುವಾರ ಬೆಳಿಗ್ಗೆ 10-35 ಕ್ಕೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆಯುವ ಈ ಕವಿಗೋಷ್ಠಿಯಲ್ಲಿ ಯಾವುದೇ ಪಕ್ಷಗಳನ್ನು ಹೊರತುಪಡಿಸಿ ಚುನಾವಣೆಯ ಜಾಗೃತಿ ಮೂಡಿಸುವ ವಿಷಯದೊಂದಿಗೆ 20 ರಿಂದ 25 ಸಾಲುಗಳ ಒಂದು ಕವನ ಶೀರ್ಷಿಕೆಯೊಂದಿಗೆ ಕವನ ವಾಚನ ಮಾಡಲು ಮುಕ್ತ ಅವಕಾಶವಿದೆ.
ಆಸಕ್ತರು ನಾಳೆಯೊಳಗೆ 94819 86868, 9900339787 ನೋಂದಾ ಯಿಸಬಹುದು. ವಿವರಕ್ಕೆ 9901122728 ಈ ಸನಿಹವಾಣಿಗೆ ಸಂಪರ್ಕಿಸಬಹುದು.