ವಾಸವಿ ಜಯಂತಿ : ನಗರದಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ

ವಾಸವಿ ಜಯಂತಿ : ನಗರದಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ - Janathavaniಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಕನ್ಯಕಾ ಪರಮೇಶ್ವರಿ ದೇವ ಸ್ಥಾನದಲ್ಲಿ ಶ್ರೀ ವಾಸವಾಂಬ ಜಯಂತ್ಯೋತ್ಸವವು ನಿನ್ನೆ ಆರಂಭವಾಗಿದ್ದು, ಇದೇ ದಿನಾಂಕ 30ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಅಮ್ಮನವರಿಗೆ ಕುಂಕುಮಾರ್ಚನೆ, ಮಂಗಳಾರತಿ, ತೀರ್ಥ – ಪ್ರಸಾದ ವಿನಿ ಯೋಗ ನಡೆಯಲಿದ್ದು, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 

ಇಂದು ಸಂಜೆ 6.30ಕ್ಕೆ ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವತಿ ಯರ ಸಂಘ ಇವರಿಂದ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ವೇಷಭೂಷಣ ದೊಂದಿಗೆ ಕನ್ನಿಕೆಯರ ಪೂಜೆ 5 ವರ್ಷದಿಂದ 10 ವರ್ಷದ ಮಕ್ಕಳಿಗೆ ನಡೆಯಲಿದೆ. ವಿವ ರಗಳಿಗೆ ಶ್ರೀಮತಿ ಕವಿತಾ ಕೃಷ್ಣಮೂರ್ತಿ (99458 00504) ಅವರನ್ನು ಸಂಪರ್ಕಿಸಬಹುದು.

ನಾಳೆ ಶನಿವಾರ ಬೆಳಿಗ್ಗೆ 10 ರಿಂದ ವಾಸವಿ ಯುವ ಸಂಘದಿಂದ ಸುಪಲ್ ಗೇಮ್ಸ್, 11ಕ್ಕೆ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘ ದಿಂದ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ ಧನ ಸಹಾಯ, ಹಿಂದುಳಿದ ಮಹಿಳೆಯರಿಗೆ, ಅಮ್ಮನ ವರಿಗೆ ಅರ್ಪಿ ಸಿದ ಸೀರೆಗಳ ವಿತರಣೆ ನಡೆ ಯಲಿದೆ. ಸಂಜೆ 6.30ಕ್ಕೆ ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವತಿಯರ ಸಂಘ ಇವರಿಂದ ವಾಸವಿ ಗಾನಾಮೃತ ದಿಂದ ವಾಸವಿ ಸ್ಮರಣೆ, ತಾಳ, ಮೇಳ, ಕೋಲಾಟ, ಆರತಿಗಳೊಂದಿಗೆ ವಿನೂತನ ಭಜನಾ ಕಾರ್ಯಕ್ರಮ ನಡೆಯಲಿದೆ.

error: Content is protected !!