ದಾವಣಗೆರೆ, ಏ. 26- ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸ್ಥಳೀಯ ಶಾಖೆಯ ಅಧ್ಯಕ್ಷರಾಗಿ ದೊಡ್ಡಬಾತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್. ಮಹೇಶ್ ಆಯ್ಕೆಯಾಗಿದ್ದಾರೆ.
ನಗರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ನಂ. 3 ವೈದ್ಯಾಧಿಕಾರಿ ಡಾ. ಎಸ್.ಎಂ. ರಾಘವೇಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ನಂ. 2 ವೈದ್ಯಾಧಿಕಾರಿ ಡಾ. ಜೆ.ಎಸ್. ನಾಗರಾಜ್, ಉಪಾಧ್ಯಕ್ಷರಾಗಿ ಡಾ. ಡಿ.ಹೆಚ್. ಗೀತಾ, ಡಾ. ಹೆಚ್.ಸಿ. ಸುದೀಪ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಡಾ. ತಿಪ್ಪೇಸ್ವಾಮಿ,
ಜಂಟಿ ಕಾರ್ಯದರ್ಶಿಯಾಗಿ ಡಾ. ಎನ್.ಎಸ್. ಶ್ರೀನಿವಾಸ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಡಾ. ಗಿರೀಶ್, ರಾಜ್ಯ ಪ್ರತಿನಿಧಿಯಾಗಿ ಡಾ. ಎಸ್. ರುದ್ರೇಶ್, ಡಾ. ಗಿರೀಶ್ ಹಾಗೂ ದಂತ ವೈದ್ಯಕೀಯ ಪ್ರತಿನಿಧಿಯಾಗಿ ಡಾ. ಟಿ.ಎಸ್. ಸಿದ್ಧರಾಮೇಶ್ವರ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸದಸ್ಯರುಗಳು : ಡಾ. ಆಶಾ ಭಾನುಪ್ರಕಾಶ್, ಡಾ. ಜಿ.ಎಂ. ಬಸವಂತ್, ಡಾ. ಎಂ. ಶಿವಪ್ರಕಾಶ್, ಡಾ. ಶಿಲ್ಪಾ ನಾಯಕ್, ಡಾ. ಜಿ.ಬಿ. ಚಂದ್ರಪ್ಪ, ಡಾ. ಎಸ್.ಸಿ. ಬಸವರಾಜ್.
ತಾಲ್ಲೂಕು ಪ್ರತಿನಿಧಿಗಳು : ಡಾ. ಜೆ. ವಿಶಾಲ್, ಡಾ. ಹೆಚ್.ಜೆ. ನರೇಂದ್ರ, ಡಾ. ಬಿ.ಸಿ. ರಾಘವೇಂದ್ರ, ಡಾ. ಹೆಚ್.ಟಿ. ಲೋಹಿತಾಶ್ವರ, ಡಾ. ಸಿ.ಎಸ್. ಕಾರ್ತಿಕ್ ಆಯ್ಕೆಯಾಗಿದ್ದಾರೆ.
ಸಂಘದ ಕಛೇರಿಯಲ್ಲಿ ಇಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.