ದಾವಣಗೆರೆ, ಏ.26 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಾಡಿದ್ದು ದಿನಾಂಕ 28 ರ ಶುಕ್ರವಾರ ಸಂಜೆ 5 ಗಂಟೆಗೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಜಿಪ್ಲೈನ್ ಕ್ರೀಡೆ ಆಯೋಜಿಸಲಾಗಿದೆ.
ಭಾಗವಹಿಸಲಿಚ್ಚಿಸುವ ಮತದಾರರು ನಿಗದಿತ ದಿನಾಂಕದಂದು ತಮ್ಮ ಚುನಾವಣಾ ಗುರುತಿನ ಚೀಟಿ ಪ್ರತಿಯೊಂದಿಗೆ ಹಾಜರಾಗಿ ಜಿಪ್ಲೈನ್ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸುಚೇತನಾ ನೆಲವಿಗಿ ತಿಳಿಸಿದ್ದಾರೆ.