ದಾವಣಗೆರೆ, ಏ. 26- ದೈವಜ್ಞ ಬ್ರಾಹ್ಮಣ ಸಮಾಜ ಸಂಘ ದಾವಣಗೆರೆ ಇವರ ವತಿಯಿಂದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಪಟ್ಟಾಭಿಷೇಕದ ರಜತ ಮಹೋತ್ಸವದ ನಿಮಿತ್ತ ಕಿರೀಟೋತ್ಸವ ಸಮಾರಂಭವನ್ನು ನಾಳೆ ದಿನಾಂಕ 27 ರ ಗುರುವಾರ ನಗರದ ಶ್ರೀ ರೇಣುಕಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಗುರುವಾರ ಬೆಳಿಗ್ಗೆ 8ಕ್ಕೆ ಮಾತೆಯರಿಂದ ಕುಂಕುಮಾರ್ಚನೆ, ಬೆಳಿಗ್ಗೆ 9 ಕ್ಕೆ ಪುರುಷರಿಂದ ಪುಷ್ಪಾರ್ಚನೆ, ವೇದಘೋಷಗಳೊಂದಿಗೆ ಶ್ರೀಗಳ ಆಗಮನ, ಬೆಳಿಗ್ಗೆ 10.30 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶ್ರೀಗಳವರ ಕಿರೀಟೋತ್ಸವ, ರಾಜೋಪಚಾರ ಪೂಜೆ, ಗುರುಸ್ತ್ರೋತ್ರ ಪಠಣ, ಫಲ-ಮಂತ್ರಾಕ್ಷತೆ, ಮಹಾಪ್ರಸಾದ, ಸಂಜೆ 4 ಕ್ಕೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದೈವಜ್ಞ ಸಮಾಜದ ಸಾಧಕರಿಗೆ ಸನ್ಮಾನ, ಸಂಜೆ 5.30 ರಿಂದ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ (ಧಾರ್ಮಿಕ ನೃತ್ಯ, ಕಿರು ನಾಟಕ, ಭರತನಾಟ್ಯ) ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸತೀಶ್ ಶ್ರೀಕಾಂತ್ ಸಾನು, ಸಾಯಿಪ್ರಕಾಶ್ ಸುಪರರಾವ್ ವೆರ್ಣೇಕರ್, ಡಿ.ಎನ್. ಸುಬ್ಬರಾವ್ ಕುಂಬಳೂರು, ರಾಘವೇಂದ್ರ, ನರಸಿಂಹಪ್ಪ, ದಿವಾಕರ ಹಡಗಲಿ, ಸಚಿನ್ ಎಸ್. ವೆರ್ಣೇಕರ್, ರಾಜೀವ್ ವೆರ್ಣೇಕರ್ ಉಪಸ್ಥಿತರಿದ್ದರು.