ಪುಷ್ಪಾ ಮಹಾಲಿಂಗಪ್ಪ ಪಿಯು ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಪುಷ್ಪಾ ಮಹಾಲಿಂಗಪ್ಪ ಪಿಯು ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ - Janathavaniದಾವಣಗೆರೆ, ಏ.22- ದ್ವಿತೀಯ ಪಿಯು ಫಲಿತಾಂಶದಲ್ಲಿ ಹಳೇಬಾತಿ ಗ್ರಾಮದ ಶ್ರೀಮತಿ ಪುಷ್ಪಾ ಶಾಮನೂರು ಮಹಾಲಿಂಗಪ್ಪ ಪದವಿ ಪೂರ್ವ ಕಾಲೇಜು ಶೇ. 100 ರಷ್ಟು ಫಲಿತಾಂಶ ಪಡೆದಿದೆ. 40 ಅತ್ಯುನ್ನತ ಶ್ರೇಣಿ, 29 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಪ್ರದೇಶದ ಕಾಲೇಜು ಶೇ. 100 ರಷ್ಟು ಫಲಿತಾಂಶ ಪಡೆದ ಎರಡನೆಯ ಕಾಲೇಜಾಗಿದೆ. ಬಿಂದು ಜಿ.ಎನ್‌. 582 ಅಂಕ ಪಡೆಯುವ ಮೂಲಕ ಜಿಲ್ಲೆಯ ಗ್ರಾಮಾಂತರ ಕಾಲೇಜಿನ 2ನೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ. ಇವರು ಕನ್ನಡ 98, ಇಂಗ್ಲಿಷ್‌ 95, ಭೌತಶಾಸ್ತ್ರ 97, ರಸಾಯನ ಶಾಸ್ತ್ರ 94, ಗಣಿತ ಶಾಸ್ತ್ರ 98, ಜೀವಶಾಸ್ತ್ರ 100 ಪಡೆದಿರುತ್ತಾರೆ. ಪ್ರಾಂಶುಪಾಲರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ. 

ಈ ಹಿಂದೆ 2017, 2018, 2019 ನೇ ವರ್ಷಗಳಲ್ಲಿ ನಿರಂತರ ಶೇ. 100 ಫಲಿತಾಂಶ ಪಡೆದು ಹ್ಯಾಟ್ರಿಕ್‌ ಸಾಧಿಸಿದ ಕೀರ್ತಿ ಈ ಕಾಲೇಜಿಗೆ ಇದ್ದು, ಮತ್ತೆ ಅದನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಉಪನ್ಯಾಸಕರು, ವ್ಯವಸ್ಥಾಪಕ ಮಂಡಳಿ ಕೈಜೋಡಿಸಿದ್ದಾರೆ.

ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 167 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ರಾಹುಲ್‌ ಸುತ್ತುಕೋಟಿ 571 ಅಂಕ ಪಡೆದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾನೆ. 41 ಅತ್ಯುನ್ನತ, ದರ್ಜೆ, 111 ಪ್ರಥಮ ಶ್ರೇಣಿ, 12 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಸರಾ ಸರಿ ಶೇ. 98.20 ರಷ್ಟು ಫಲಿತಾಂಶ ಬಂದಿದೆ. 

ಒಟ್ಟಾರೆ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶ ಶಾಮನೂರು ಶಿಕ್ಷಣ ಸಂಸ್ಥೆಗೆ ಬಂದಿದೆ. 81 ಅತ್ಯುನ್ನತ ಶ್ರೇಣಿ, 140 ಪ್ರಥಮ ಶ್ರೇಣಿ, 12 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

error: Content is protected !!