ಹೊಳೆಸಿರಿಗೆರೆ ಕಾಲೇಜಿಗೆ ಶೇ.76 ಫಲಿತಾಂಶ

ಹೊಳೆಸಿರಿಗೆರೆ ಕಾಲೇಜಿಗೆ ಶೇ.76 ಫಲಿತಾಂಶ - Janathavaniಮಲೇಬೆನ್ನೂರು, ಏ.22- ಹೊಳೆಸಿರಿಗೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.76 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 50 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ವಿಜ್ಞಾನ ವಿಭಾಗಕ್ಕೆ ಶೇ.80.76 ಮತ್ತು ಕಲಾ ವಿಭಾಗಕ್ಕೆ ಶೇ.70.83ರಷ್ಟು ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗಕ್ಕೆ ಜಿ.ಎನ್.ಚಂದನಾ 600ಕ್ಕೆ 524 ಮತ್ತು ಕಲಾ ವಿಭಾಗದಲ್ಲಿ ಕೆ.ಪಿ.ಸೋಮಲಿಂಗ 600ಕ್ಕೆ 515 ಅಂಕ ಪಡೆದಿದ್ದಾರೆ.

error: Content is protected !!