ದಾವಣಗೆರೆ, ಏ.21- ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ಅಪಹರಿಸಿ ಹಲವಾರು ಬಾರಿ ಅತ್ಯಾಚಾರಗೈದ ಆರೋಪಿ ನದೀಮ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಫೋಕ್ಸೋ ಕಾಯ್ದೆ ಅಡಿ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡ ವಿಧಿಸಿದೆ.
ನಗರದ ಅನ್ವರ್ ಎಂಬುವರ ಮಗ ನದೀಮ್ ಬೆಂಗಳೂರಿ ಎಂಬಾತ ಅಪ್ರಾಪ್ತೆಯನ್ನು ಆಗಾಗ ಶಾಲೆಗೆ ಹೋಗುವಾಗ ಮಾತನಾಡಿಸುವ ಮೂಲಕ ಪರಿಚಯ ಮಾಡಿಕೊಂಡು, ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ, ಅದಕ್ಕೆ ಸಂತ್ರಸ್ಥೆ ಒಪ್ಪದೇ ಹೋದಾಗ ಒತ್ತಾಯಪೂರ್ವಕವಾಗಿ ಬಸ್‌ನಲ್ಲಿ ಗೋಕಾಕ್‌ಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಇರಿಸಿ, ಬಲವಂತವಾಗಿ ಹಲವಾರು ಬಾರಿ ಪ್ರತಿದಿನ ಅತ್ಯಾಚಾರ ಮಾಡಿದ್ದಾನೆ. ಈ ಸಂಬಂಧ ಆರೋಪಿ ವಿರುದ್ದ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ. ದಂಡದ ಹಣದಲ್ಲಿ 25 ಸಾವಿರ ರೂಗಳನ್ನು ಸಂತ್ರಸ್ಥೆಗೆ ಪರಿಹಾರವಾಗಿ ನೀಡಬೇಕು, ಅಲ್ಲದೇ ಸರ್ಕಾರವು 5 ಲಕ್ಷ ರೂ. ಗಳನ್ನು ಸಂತ್ರಸ್ಥೆಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಧೀಶರಾದ ಎನ್.ಶ್ರೀಪಾದ್ ಅವರು ಆದೇಶಿ ಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು. ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಶಿಲ್ಪಾ ವೈ.ಎಸ್. ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.