ನಗರದ ಬಸವ ಬಳಗದಲ್ಲಿ ಇಂದು ವೇಷಭೂಷಣ ಸ್ಪರ್ಧೆ

ಬಸವ ಬಳಗ, ನೀಲಾಂಬಿಕಾ ಅನುಭಾವ ಕೇಂದ್ರ ಹಾಗೂ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್‌ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು – ನಾಳೆ ಬಸವ ಜಯಂತಿ ಕಾರ್ಯಕ್ರಮಗಳನ್ನು ಸರಸ್ವತಿ ನಗರದ ಬಸವ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಶರಣ – ಶರಣೆಯರ ವೇಷ ಭೂಷಣ ಸ್ಪರ್ಧೆ, ದಿನಾಂಕ 23 ರ ಬೆಳಿಗ್ಗೆ 7 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಫೋನ್ ಸಂಖ್ಯೆ :  99720 84938, 73377 37884.

error: Content is protected !!