ದಾವಣಗೆರೆ, ಏ.21- ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಕಳೆದ 15 ದಿನಗಳ ಹಿಂದೆ ಅಸ್ವಸ್ಥರಾಗಿ ಬಿದ್ದಿದ್ದವನನ್ನು ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುತ್ತಾನೆ. ಮೃತ ದೇಹವನ್ನು ಸಿ.ಜಿ. ಆಸ್ಪತ್ರೆಯ ಶವಾಗಾರ ದಲ್ಲಿ ಇಟ್ಟಿದ್ದು ವಾರಸುದಾರರು ಯಾರಾದರೂ ಇದ್ದಲ್ಲಿ ಬಡಾವಣೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.
ಮೃತ ವ್ಯಕ್ತಿಯು ಸುಮಾರು 60 ವರ್ಷದವನಾಗಿದ್ದು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಮುಖದ ಮೇಲೆ ಕುರುಚಲು ಕಪ್ಪುಬಿಳಿ ಮಿಶ್ರಿತ ದಾಡಿ ಬಿಟ್ಟಿದ್ದು, ಮುಂದಲೆ ಬೊಕ್ಕ ತಲೆಯಿದೆ. ಮೈಮೇಲೆ ತಿಳಿನೀಲಿ ಬಣ್ಣದ ಶರ್ಟ್ ತೊಟ್ಟಿರುತ್ತಾನೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ 08192-272012, 08192-259213, 08192-253400, 08192-253100.