ದಾವಣಗೆರೆ, ಏ. 21- ಸುಡಾನ್‍ನಲ್ಲಿ ನಡೆಯು ತ್ತಿರುವ ಯುದ್ದದ ಕಾರಣದಿಂದ ಸಿಲುಕಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಗ್ರಾಮದ 29 ಜನ ಹಾಗೂ ಅಸ್ತಾಫನಹಳ್ಳಿ ಗ್ರಾಮದ 13 ಜನ ಒಟ್ಟು 42 ಜನ ಹಕ್ಕಿ ಪಿಕ್ಕಿ ಜನಾಂಗದ ಗಿಡಮೂಲಿಕೆ ವ್ಯಾಪಾರಸ್ಥರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್‍ರವರಿಗೆ ಹಾಗೂ ರಾಜ್ಯ ಸಚಿವ ವಿ.ಮುರುಳೀಧರನ್‍ರವರಿಗೆ ಹಾಗೂ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು ಮನವಿ ಮಾಡಿ ದ್ದಾರೆ. ಸುಡಾನ್‍ನಲ್ಲಿ ಸಿಲುಕಿರುವ ಜಿಲ್ಲೆಯ ಜನರಿಗೆ ಸುಡಾನ್‍ನಲ್ಲಿರುವ ಭಾರತೀಯ ರಾಯಭಾರಿ ಕಛೇರಿ ನೀಡುವ ಸಲಹೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಆಹಾರ ಪೂರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಡಾನ್‍ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಗೆ ನಿರ್ದೇಶನ ನೀಡುವಂತೆ ಸಚಿವರಲ್ಲಿ ಸಂಸದರು ಮನವಿ ಮಾಡಿಕೊಂಡಿದ್ದಾರೆ.