ದಾವಣಗೆರೆ, ಏ.21- ಹೆಸರಾಂತ ಜಾನಪದ ಕಲಾವಿದ, ಬಂಜಾರ ಭಾಷಾ ಸಂಸ್ಕೃತಿ ಸಮಿತಿ ಸದಸ್ಯ ಉಮೇಶ ನಾಯಕ್ ಚಿನ್ನಸಮುದ್ರ ಅವರಿಗೆ `ರಾಜ್ಯ ಕಂಠಸಿರಿ ಪ್ರಶಸ್ತಿ’ ಸಂದಿದೆ.
ವಿಜಯಪುರ ಜಿಲ್ಲೆಯ ಅರಕೆರೆಯಲ್ಲಿ ಇದೇ ದಿನಾಂಕ 25ರ ಮಂಗಳವಾರ ಎ.ಎಂ. ಆರ್. ಸಂಕಲ್ಪ ಸಂಜೀವಿನಿ ಸಂಸ್ಥೆ ಮತ್ತು ಶ್ರೀ ಸೇವಾಲಾಲ್ ಪರಿಶಿಷ್ಟ ಜಾತಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಜರುಗುವ ಶ್ರೀ ಹಮುಲಾಲ್ ಮಹಾರಾಜರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.