ಶ್ರೀ ಜಗಜ್ಯೋತಿ ಬಸವೇಶ್ವರರ 112ನೇ ವರ್ಷದ ಜಯಂತ್ಯೋತ್ಸವವು ಇಂದಿನಿಂದ ನಾಲ್ಕು ದಿನಗಳ ಕಾಲ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಇಂದು ರಾತ್ರಿ 7.30ಕ್ಕೆ ಚೌಕಿಪೇಟೆಯ ಶ್ರೀ ಗುರು ಶಿವ ಯೋಗಿ ಬಕ್ಕೇಶ್ವರ ಮಹಾಸ್ವಾಮಿ ಭಜನಾ ಸಂಘದಿಂದ ಭಜನೆ ಜರುಗಲಿದೆ. ದಿನಾಂಕ 23ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಹಿಳೆಯರಿಂದ ತೊಟ್ಟಿಲು ಪೂಜಾ ಕಾರ್ಯಕ್ರಮ, ಸಂಜೆ 6 ಗಂಟೆಗೆ ಹೂವಿನ ಅಲಂಕಾರ ಅಡ್ಡ ಪಲ್ಲಕ್ಕಿಯಲ್ಲಿ ಶ್ರೀ ಬಸವೇಶ್ವರರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆ ಏರ್ಪಾಡಾಗಿದೆ.