ನೀತಿ ಸಂಹಿತೆ ಉಲ್ಲಂಘನೆ; 4928.62 ಲೀ. ಮದ್ಯ ವಶ : ಡಿಸಿ ಶಿವಾನಂದ್ ಕಾಪಶಿ

ದಾವಣಗೆರೆ, ಏ.19- ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್‍ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 18 ರಂದು ರೂ.76,07,523 ಮೌಲ್ಯದ 4928.62 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. 

ಜಿಲ್ಲೆಯಾದ್ಯಂತ ವಿವಿಧ ಚೆಕ್‍ಪೋಸ್ಟ್‍ಗ ಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾ ಗುತ್ತಿದ್ದು, ಇದುವರೆಗೆ ರೂ.89,61,648 ನಗದು, ರೂ.2,31,97,646.10 ಮೌಲ್ಯದ 19,702.17 ಲೀ ಮದ್ಯ, 3.724 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.66,610, ರೂ.54,26,735 ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು ರೂ.3.76 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ. 

ಏ.18 ರಂದು ಲಾರಿ ಸಮೇತ 4928.62 ಲೀ ಮದ್ಯವನ್ನು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಲಾಗಿದೆ. ಇದು ಪರವಾನಗಿ ಪಡೆದ ಮಾರ್ಗದಲ್ಲಿ ಸಾಗದೆ ಬೇರೆ ಮಾರ್ಗದಲ್ಲಿ ಸಾಗಣೆ ಮಾಡಿರುವುದರಿಂದ ಅಬಕಾರಿ ದಳದವರು ತಪಾಸಣೆ ಮಾಡಿ ವಶಪಡಿಸಿಕೊಂಡಿದ್ದಾರೆ.

error: Content is protected !!