112ನೇ ವರ್ಷದ ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ಬಸವ ಪ್ರಭಾತ್ ಪೇರಿಯನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದ್ದು, ಇದೇ ದಿನಾಂಕ 23ರವರಗೆೆ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 7.30 ಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ಜರುಗಲಿದ್ದು, ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ. ಶ್ರೀ ವಿರಕ್ತ ಮಠ – ಶ್ರೀ ಶಿವಯೋಗಾ ಶ್ರಮದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸುವರು.
ಇಂದು ಮದಕರಿ ನಾಯಕ ವೃತ್ತ, ಜಾಲಿನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಸವ ಪ್ರಭಾತ್ ಪೇರಿ ಸಂಚರಿಸಲಿದೆ.
ನಾಳೆ ಗುರುವಾರ ಮದಕರಿ ನಾಯಕ ವೃತ್ತ, ಛಲವಾದಿ ಕೇರಿ, ದಿನಾಂಕ 21ರ ಶುಕ್ರವಾರ ಮದಕರಿ ನಾಯಕ ವೃತ್ತ, ತಳವಾರ ಕೇರಿ, ಕಾಳಿಕಾದೇವಿ ರಸ್ತೆ, ದಿನಾಂಕ 22ರ ಶನಿವಾರ ಕಾಳಿಕಾದೇವಿ ರಸ್ತೆ, ಆನೆಕೊಂಡ ಪೇಟೆ, ಹಳೇಪೇಟೆ, ಎಸ್.ಕೆ.ಪಿ. ರಸ್ತೆಯಿಂದ ವಿರಕ್ತ ಮಠ ತಲುಪಲಿದೆ.
ಬಸವ ಪ್ರಭಾತ್ ಪೇರಿಯಲ್ಲಿ ಭಾಗವಹಿಸಲಿಚ್ಚಿಸುವವರು ವಿವರಕ್ಕೆ ಮೊಬೈಲ್
96118-89151 ರಲ್ಲಿ ಸಂಪರ್ಕಿಸುವಂತೆ ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ ಕೋರಿದ್ದಾರೆ.