ಹರಿಹರ, ಏ.18- ನಾಡಿದ್ದು ದಿನಾಂಕ 20 ರ ಗುರುವಾರ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಹರಿಹರ ತಾಲ್ಲೂಕು ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ ಹಾಗೂ ಶ್ರೀ ಹನುಮಂತದೇವರ ಜೀರ್ಣೋದ್ಧಾರ ಸಮಿತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಗೋಣಿ ಬಸವೇಶ್ವರ ಹಾಗೂ ನಾಗದೇವತಾ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯುವುದು.
ನಂತರ 11.30 ಕ್ಕೆ ಬುಳ್ಳಾಪುರದ ಹನುಮಂತಪ್ಪನವರ ಮಗ ವಿಜಯ ಬುಳ್ಳಾಪುರ, ಹಾವೇರಿ ಜಿಲ್ಲೆ ಚೌಡೇಶ್ವರಿ ನಗರ ರಟ್ಟಿಹಳ್ಳಿಯ ಶ್ರೀಮತಿ ರೇಷ್ಮ ಮತ್ತು ಮಕ್ಕಳು ಇವರುಗಳಿಂದ ಪ್ರಸಾದ ಸೇವಾ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.