ರಾಣೇಬೆನ್ನೂರು, ಏ.18- ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಅನುಯಾಯಿಯಾಗಿ ಮೂರು ದಶಕಗಳ ಹಿಂದೆ ರಾಜಕೀಯ ಪ್ರವೇಶಿಸಿದ್ದ ಡಾ.ಮೋಹನ ಹಂಡೆ ಅವರು ವಿವಿಧ ಪಕ್ಷಗಳಿಂದ ಎರಡು ಬಾರಿ ವಿಧಾನಸಭೆ, ಒಂದು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದು, ಈಗ ಪಕ್ಷೇತರರಾಗಿ ವಿಧಾನಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ನನ್ನ ಸಹಾಯ ಪಡೆದು ಆಯ್ಕೆಯಾಗಿದ್ದ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಹಾಗೂ ಮಾಜಿ ಮಂತ್ರಿ ಆರ್.ಶಂಕರ್ ಅವರುಗಳು ತಮಗೆ ಬೆಂಬಲ ನೀಡಿ ನನ್ನ ಋಣ ತೀರಿಸಬೇಕಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ. ಹಂಡೆ ಹೇಳಿದರು.
ಮನಿಮಠ ಸ್ಪರ್ಧೆ : ಸಾಮಾಜಿಕ ಜಾಲತಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಜಯ್ಯ ಮನಿಮಠ ಅವರು ಹಿಂದೂಸ್ತಾನ್ ಜನತಾ ಪಕ್ಷದಿಂದ ಈ ಬಾರಿ ಸ್ಪರ್ಧಿಸಲು ಟಿಕೆಟ್ ಪಡೆದಿದ್ದು, ನಾಡಿದ್ದು ದಿನಾಂಕ 20 ಅಮಾವಾಸ್ಯೆ ದಿನದಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.