ರಂಗೇರುತ್ತಿರುವ ಚುನಾವಣಾ ಕಣ

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ, ಒಂದೇ ದಿನ 35 ನಾಮಪತ್ರಗಳ ಸಲ್ಲಿಕೆ

ದಾವಣಗೆರೆ, ಏ. 17- ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಸೋಮವಾರ  7 ಕ್ಷೇತ್ರಗಳಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟಾರೆ ಇಲ್ಲಿಯವರೆಗೆ 41 ನಾಮಪತ್ರ ಸಲ್ಲಿಕೆಯಾಗಿವೆ.

ಸಲ್ಲಿಸಿರುವ ನಾಮಪತ್ರಗಳ ಪೈಕಿ ಜಗಳೂರು ಕ್ಷೇತ್ರದಿಂದ 3, ಹರಿಹರ 2, ದಾವಣಗೆರೆ ಉತ್ತರ 8, ದಾವಣಗೆರೆ ದಕ್ಷಿಣ 5, ಮಾಯಕೊಂಡ 11, ಚನ್ನಗಿರಿ 3 ಹಾಗೂ ಹೊನ್ನಾಳಿ ಕ್ಷೇತ್ರದಿಂದ 3 ನಾಮಪತ್ರಗಳು ಸೇರಿವೆ.

ಜಗಳೂರು ಪ.ಪಂ ಮೀಸಲು ಕ್ಷೇತ್ರದಲ್ಲಿ  ಬಿಜೆಪಿ ಯಿಂದ ಎಸ್.ವಿ.ರಾಮಚಂದ್ರ 2 ನಾಮಪತ್ರ, ಅವರ ಪತ್ನಿ ಇಂದಿರಾ ಎಸ್.ಆರ್ 1 ನಾಮಪತ್ರ ಸಲ್ಲಿಸಿದರು.  

ಹರಿಹರ ಸಾಮಾನ್ಯ ಕ್ಷೇತ್ರದಿಂದ ಜಾತ್ಯತೀತ ಜನತಾದಳದಿಂದ ಹೆಚ್.ಎಸ್. ಶಿವಶಂಕರ್ 2 ನಾಮಪತ್ರ. ದಾವಣಗೆರೆ ಉತ್ತರ ಸಾಮಾನ್ಯ ಎಂ.ಜಿ.ಶ್ರೀಕಾಂತ್ ಪಕ್ಷೇತರ, ನಾಗಾರ್ಜುನ್ ಜಿ.ಆರ್. ಉತ್ತಮ ಪ್ರಜಾಕೀಯ ಪಕ್ಷ, ಎಸ್.ಎಸ್.ಮಲ್ಲಿಕಾ ರ್ಜುನ್ ಭಾರತೀಯ ಕಾಂಗ್ರೆಸ್ ಪಕ್ಷದಿಂದ 2 ನಾಮ ಪತ್ರ, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟ್ರ ಸಮಿತಿಯಿಂದ 2 ನಾಮಪತ್ರ, ಲೋಕಿಕೆರೆ ನಾಗರಾಜ್ ಭಾರತೀಯ ಜನತಾ ಪಾರ್ಟಿ, ಮಲ್ಲಿಕಾರ್ಜುನಪ್ಪ ಕೆ.ಎಂ. ಪಕ್ಷೇತರ ಸೇರಿ 8 ನಾಮಪತ್ರಗಳು ಸಲ್ಲಿಕೆಯಾಗಿವೆ.

ದಾವಣಗೆರೆ ದಕ್ಷಿಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಶಾಮನೂರು ಶಿವಶಂಕರಪ್ಪ 2 ನಾಮಪತ್ರ, ಜೆ.ಡಿ.ಎಸ್ ನಿಂದ ಎಂ.ರಾಜಾಸಾಬ್, ಬಿ.ಜೆ.ಪಿ.ಯಿಂದ ಅಜಯಕುಮಾರ್ ಬಿ.ಜಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಇಸ್ಮಾಯಿಲ್ ಜಬೀವುಲ್ಲಾ ಸೇರಿದಂತೆ 5 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಾಯಕೊಂಡ ಪ.ಜಾ.ಮೀಸಲು ಕ್ಷೇತ್ರಕ್ಕೆ ಪಕ್ಷೇತರರಾಗಿ ವಾಗೀಶ್ ಬಿ.ಎಂ. 2 ನಾಮಪತ್ರ,  ಲೋಕೇಶ್ ಪಿ.ಡಿ ಪಕ್ಷೇತರ,  ಎಂ.ಬಸವರಾಜನಾಯ್ಕ ಬಿಜೆಪಿ, ಸವಿತಾಬಾಯಿ ಮಲ್ಲೇಶನಾಯ್ಕ ಪಕ್ಷೇತರ, ಸವಿತಾಬಾಯಿ ಮಲ್ಲೇಶನಾಯ್ಕ ಜೆಡಿಎಸ್, ಸೋಮಶೇಖರ್ ಬಿ. ಕರ್ನಾಟಕ ರಾಷ್ಟ್ರ ಸಮಿತಿ, ಹೆಚ್.ಆನಂದಪ್ಪ ಜೆಡಿಎಸ್, ಜಿ.ಎಸ್.ಶ್ಯಾಮ್ ಬಿ.ಜೆ.ಪಿ., ಚೇತನ್‍ಕುಮಾರ್ ನಾಯ್ಕ ಉತ್ತಮ ಪ್ರಜಾಕೀಯ, ಕೆ.ಎಸ್.ಬಸವರಾಜ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಇದುವರೆಗೆ 11 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚನ್ನಗಿರಿ ಪಕ್ಷೇತರ ಎಂ.ವಿ.ಮಲ್ಲಿಕಾರ್ಜುನ, ಬಿ.ಜೆ.ಪಿ. ಹೆಚ್.ಎಸ್.ಶಿವಕುಮಾರ್, ಬಿ.ಎಸ್.ಪಿ.ಯಿಂದ ಪ್ರವೀಣ್ ಹೆಚ್ ಸೇರಿ 3 ನಾಮಪತ್ರಗಳು.

ಹೊನ್ನಾಳಿ ಸಾಮಾನ್ಯ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಶಾಂತನಗೌಡ ಡಿ.ಜಿ,  ಬಿ.ಜೆ.ಪಿ.ಯಿಂದ ಎಂ.ಪಿ. ರೇಣುಕಾಚಾರ್ಯ,  ಉತ್ತಮ ಪ್ರಜಾಕೀಯ ಪಕ್ಷದಿಂದ ಗಣೇಶ್ ಬಿ.ಎ ಸೇರಿ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

error: Content is protected !!