ದಾವಣಗೆರೆ, ಏ. 14- ಜಿಲ್ಲಾ ಬಹುಜನ ಸೇವಾ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 132 ನೇ ಜನ್ಮ ದಿನದ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಂ. ಆಂಜನೇಯ ಹಾಗು ಪದಾಧಿಕಾರಿಗಳಾದ ಡಿ.ಜೆ. ರಾಘವೇಂದ್ರ, ಹಿಂಡಸಘಟ್ಟ ಹನುಮಂತಪ್ಪ, ನಾಗೇಶ್, ಮಹಿಳಾ ಅಧ್ಯಕ್ಷರಾದ ಆಶಾ ರಾಘವೇಂದ್ರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.