ಜಗಳೂರು : ಲೋಕಶಕ್ತಿಯಿಂದ ಅಜ್ಜಯ್ಯ ಮದಕರಿ ಸ್ಪರ್ಧೆ

ದಾವಣಗರೆ, ಏ. 14-  ಜಗಳೂರು ವಿಧಾನಸಭಾ ಕ್ಷೇತ್ರದಿಂದ ಲೋಕಶಕ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪಿ.ಅಜ್ಜಯ್ಯ ಮದಕರಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಇಟ್ಟುಕೊಂಡು ಸ್ಪರ್ಧಿಸುವುದಾಗಿ ಅವರು ಹೇಳಿದರು. ಇದೇ ದಿನಾಂಕ 17ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದರು. ಬಿ.ಪಿ. ವಿಜಯಗೌಡ್ರು ಎಲೆಬೇತೂರು, ಹನುಮೇಶ್ ಬಿಳಿಚೋಡು, ರೇವಣ್ಣ ಮೆಳ್ಳೇಕಟ್ಟೆ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!