ನೀತಿ ಸಂಹಿತೆ ಉಲ್ಲಂಘನೆ : 1.67 ಕೋಟಿ ನಗದು, ಇತರೆ ವಸ್ತುಗಳ ವಶ

ದಾವಣಗೆರೆ, ಏ. 14- ಜಿಲ್ಲೆಯಾದ್ಯಂತ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ನಗರದ ಪಿ.ಜೆ. ಬಡಾವಣೆಯಲ್ಲಿ ಯಾವುದೇ ಅನುಮತಿ ಪಡೆಯದೇ ಟೆಲಿ ಪ್ರಚಾರ ನಡೆಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ಆಧರಿಸಿ ರೂ.6 ಲಕ್ಷ ಮೌಲ್ಯದ 59 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ. ಇದಲ್ಲದೇ 48 ಸಾವಿರ ರೂ.  ಮೌಲ್ಯದ 128.01 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

 ಇದುವರೆಗೆ 50.1 ಲಕ್ಷ ರೂ. ನಗದು,  62.4 ಲಕ್ಷ ರೂ.  ಮೌಲ್ಯದ 6273.195 ಲೀ ಮದ್ಯ, ಅಂದಾಜು 48.2 ಲಕ್ಷ ಮೌಲ್ಯದ 3.209 ಕೆ.ಜಿ ಮಾದಕ ವಸ್ತು,  48.2 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 1.67 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ. 

ನಿನ್ನೆ ವಶಪಡಿಸಿಕೊಂಡ ಮದ್ಯದಲ್ಲಿ 43.19 ಲೀ ಪೊಲೀಸ್ ಇಲಾಖೆ ಮತ್ತು 84.82 ಲೀ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ. 

error: Content is protected !!