ದಾವಣಗೆರೆ, ಏ. 13 – ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು 81.93 ಕೋಟಿ ರೂ.ಗಳ ಚರಾಸ್ತಿ ಹಾಗೂ 70.77 ಕೋಟಿ ರೂ.ಗಳ ಸ್ಥಿರಾಸ್ತಿಗೆ ಮಾಲೀಕರಾಗಿದ್ದಾರೆ.
ಅವರು ಹೊಂದಿರುವ ಆಸ್ತಿಯ ಒಟ್ಟು ಮೌಲ್ಯ 152.7 ಕೋಟಿ ರೂ. ಎಂದು ನಾಮಪತ್ರದ ವೇಳೆ ಸಲ್ಲಿಸಿರುವ ಆಸ್ತಿಗಳ ವಿವರದಲ್ಲಿ ತಿಳಿಸಲಾಗಿದೆ.
ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು 5.88 ಕೋಟಿ ರೂ.ಗಳ ಚರಾಸ್ತಿ ಹಾಗೂ 30.61 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಅವರು ಹೊಂದಿರುವ ಆಸ್ತಿಗಳ ಒಟ್ಟು ಮೌಲ್ಯ 36.49 ಕೋಟಿ ರೂ. ಆಗಿದೆ.
ಅಲ್ಲದೇ, ಮಲ್ಲಿಕಾರ್ಜುನ್ ಅವರು 23.60 ಕೋಟಿ ರೂ. ಸಾಲ ಹೊಂದಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಹೊಂದಿರುವ ಸಾಲ 97.28 ಲಕ್ಷ ರೂ. ಎಂದು ತಿಳಿಸಲಾಗಿದೆ.
2022-23ರ ಹಣಕಾಸು ವರ್ಷದಲ್ಲಿ 2.07 ಕೋಟಿ ರೂ.ಗಳ ಆದಾಯದ ಬಗ್ಗೆ ಐದಾಯ ತೆರಿಗೆ ಇಲಾಖೆಗೆ ರಿಟರ್ನ್ ದಾಖ ಲಿಸಿರುವುದಾಗಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಕೈಯ್ಯಲ್ಲಿರುವ ನಗದು 3.66 ಲಕ್ಷ ರೂ. ಹಾಗೂ ಬ್ಯಾಂಕುಗಳಲ್ಲಿರುವ ಠೇವಣಿ 1.56 ಕೋಟಿ ರೂ., ಷೇರು ಇತ್ಯಾದಿಗಳ ಮೇಲಿನ ಹೂಡಿಕೆ 54.40 ಕೋಟಿ ರೂ., ಉಳಿತಾಯಗಳ ಮೇಲಿನ ಹೂಡಿಕೆ 4.15 ಕೋಟಿ ರೂ., ಬೇರೆಯವರಿಗೆ ನೀಡಿರುವ ಸಾಲ 6.41 ಕೋಟಿ ರೂ., ಆಭರಣಗಳ ಮೌಲ್ಯ 15.35 ಕೋಟಿ ರೂ. ಎಂದು ತಿಳಿಸಲಾಗಿದೆ. ಪ್ರಭಾ ಮಲ್ಲಿಕಾರ್ಜುನ್ ಅವರು ಹೊಂದಿರುವ ನಗದು 34,407 ರೂ., ಬ್ಯಾಂಕ್ ಠೇವಣಿ 11.20 ಲಕ್ಷ ರೂ., ಷೇರು ಇತ್ಯಾದಿಗಳ ಹೂಡಿಕೆ 2.65 ಕೋಟಿ ರೂ., ವೈಯಕ್ತಿಕವಾಗಿ ನೀಡಿರುವ ಸಾಲ 2.02 ಕೋಟಿ ರೂ., ಆಭರಣಗಳ ಮೌಲ್ಯ 1 ಕೋಟಿ ರೂ. ಹಾಗೂ ಇತರೆ ಕ್ಲೇಮುಗಳು 8.26 ಲಕ್ಷ ರೂ. ಎಂದು ತಿಳಿಸಲಾಗಿದೆ.
ಮಲ್ಲಿಕಾರ್ಜುನ್ ಅವರು ಹೊಂದಿರುವ ಕೃಷಿ ಜಮೀನು 226.03 ಎಕರೆ, ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 7.56 ಕೋಟಿ ರೂ. ಆಗಿದೆ. ಪ್ರಭಾ ಮಲ್ಲಿಕಾರ್ಜುನ್ ಅವರು 47.11 ಎಕರೆ ಜಮೀನು ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 95.93 ಲಕ್ಷ ರೂ.ಗಳಾಗಿದೆ.
ಮಲ್ಲಿಕಾರ್ಜುನ್ ಅವರು 53.02 ಕೋಟಿ ರೂ.ಗಳ ಕೃಷಿಯೇತರ ಜಮೀನು ಹೊಂದಿದ್ದಾರೆ. 97.50 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಅವರು 9.33 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.
ಅಲ್ಲದೇ, ಮಲ್ಲಿಕಾರ್ಜುನ್ ಹೊಂದಿರುವ ವಸತಿ ಕಟ್ಟಡಗಳ ಮೌಲ್ಯ 70.77 ಕೋಟಿ ರೂ. ಆಗಿದೆ. ಪ್ರಭಾ ಮಲ್ಲಿಕಾರ್ಜನ್ ಅವರು 30.61 ಕೋಟಿ ರೂ. ಮೌಲ್ಯದ ವಸತಿ ಕಟ್ಟಡಗಳನ್ನು ಹೊಂದಿದ್ದಾರೆ.